ಕಿತ್ತೂರು ವಿಜಯ ಸುದ್ದಿ.ಅಂಗನವಾಡಿ ಸಹಾಯಕಿಯಿಂದ 1 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಿಡಿಪಿಓ


ಯಾದಗಿರಿ : ಅಂಗನವಾಡಿ ಸಹಾಯಕಿಯ ಗೈರು ಹಾಜರಾತಿ ಸಕ್ರಮಗೊಳಿಸಲು ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ವನಜಾಕ್ಷಿ ಅವರು ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ

ಗೈರು ಹಾಜರಿ ಸಕ್ರಮಗೊಳಿಸಿ ವೇತನ ಬಿಡುಗಡೆ ಮಾಡಲು ಸಿಡಿಪಿಓ ಅವರು ಒಂದು ಲಕ್ಷ ರೂಪಾಯಿವರೆಗೆ ಬೇಡಿಕೆ ಇಟ್ಟಿದ್ದರು. ಯಾದಗಿರಿ ನಗರದ ಬಸ್ ನಿಲ್ದಾಣದ ಬಳಿ ಶುಕ್ರವಾರ 80 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಯಾದಗಿರಿ ಲೋಕಾಯುಕ್ತ ಡಿವೈ ಎಸ್ಪಿ ಜೆ.ಹೆಚ್. ಇನಾಮದಾರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಈ ವೇಳಲೆ ಪಿಐ ಸಿದ್ದರಾಯ, ಸಂಗಮೇಶ ಹಾಗೂ ಇತರ ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Post a Comment

0 Comments