ಕಿತ್ತೂರು ವಿಜಯ ಸುದ್ದಿ.ಲಂಚಕ್ಕೆ ಬೇಡಿಕೆ: ನಿವೃತ್ತಿ ದಿನವೇ ಲಾಕ್ ಆದ ಅಧಿಕಾರಿ


 ಉನ್ನತ ಮಟ್ಟದ ಸರ್ಕಾರಿ ಅಧಿಕಾರಿ. ಇಂದು ಒಂದು ದಿನ ನಿಯತ್ತಾಗಿ ಕೆಲಸ ಮಾಡಿದ್ರೆ ನಿವೃತ್ತಿ ಜೀವನ ಅರಾಮಾಗಿ ಕಳೆಯಬಹುದಿತ್ತು. ಆದರೆ ಲಂಚ ಎಂಬ ಎಂಜಲು ಕಾಸಿನ ಆಸೆಗೆ ಬಿದ್ದು ಲಾಕ್ ಆಗಿದ್ದಾನೆ.

ತನ್ನ ನಿವೃತ್ತಿಯ ಜೀವನದ ಕಟ್ಟ ಕಡೆಯ ದಿನವೇ ಲಂಚಕ್ಕೆ ಡಿಮ್ಯಾಂಡ್ ಮಾಡಿ, ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದಿದ್ದಾನೆ.ಶಿವಮೊಗ್ಗದ ಸ್ಮಾರ್ಟ್ ಸಿಟಿ ಚೀಫ್ ಇಂಜಿನಿಯರ್ ಕೃಷ್ಣಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಪ್ರಭಾರ ಎಂಜಿನಿಯರ್ ಕೃಷ್ಣಪ್ಪ ಬಿಲ್ ಒಂದನ್ನು ಪಾಸ್ ಮಾಡಲು 1 ಲಕ್ಷ ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಎಲ್‌ಇಡಿ ಪರದೆ ಅಳವಡಿಕೆ ಮಾಡುತ್ತಿದ್ದ ಖಾಸಗಿ ಕಂಪನಿಯಿಂದ ಇಂಜಿನಿಯರ್ 1 ಲಕ್ಷ ರೂ. ಲಂಚ ಕೇಳಿದ್ದರು ಎಂದು ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಈ. ಕಾರ್ಯಾಚರಣೆ  ನಡೆಸಿದ್ದಾರೆ.

Post a Comment

0 Comments