ಕಿತ್ತೂರುವಿಜಯ ಸುದ್ದಿ.ಚನ್ನಮ್ಮನ-ಕಿತ್ತೂರು ದಿನಾಂಕ 27-04-2025 ರಂದು ಮುಂಜಾನೆ 09-30 ಕ್ಕೆ ಅನುಭವ ಮಂಟಪದ ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ರಥ ಯಾತ್ರೆ ಕಿತ್ತೂರ ಪಟ್ಟಣಕ್ಕೆ ಆಗಮಿಸಿತು. ಸದರಿ ರಥಯಾತ್ರೆನ್ನು ಕಿತ್ತೂರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚೆನ್ನಮ್ಮಾಜಿ ಪುಥ್ಥಳಿಯ ಹತ್ತಿರ ಬರಮಾಡಿಕೊಳ್ಳಲಾಯಿತು. ಸದರಿ ರಥಯಾತ್ರೆಗೆ ತಾಲೂಕಾ ಆಡಳಿತದಿಂದ ಮಾನ್ಯ ತಹಶೀಲ್ದಾರರಾದ ಶ್ರೀ ರವೀಂದ್ರ.ಕೆ.ಹಾದಿಮನಿ, ಶ್ರೀ ಸಂಜೀವ ಮಿರಜಕರ, ಎ.ಇ.ಇ ಪಿ.ಡಬ್ಲೂ.ಡಿ.ಕಿತ್ತೂರ, ಶ್ರೀ ಎಂ.ಎಂ.ನೀರಲಗಿ, ಕಂದಾಯ ನಿರೀಕ್ಷಕರು ಕಿತ್ತೂರ, ಹಾಗೂ ಸುತ್ತಮುತ್ತಲ ಗ್ರಾಮಗಳ ಬಸವ ದಳದ ಕಾರ್ಯಕರ್ತರಾದ ಶ್ರೀ ಚಂದ್ರಗೌಡ ಪಾಟೀಲ, ಶ್ರೀ ಅಶೋಕ ಅಳ್ನಾವರ, ಶ್ರೀ ಡಿ.ಆರ್.ಪಾಟೀಲ, ಶ್ರೀ ಜಗದೀಶ ಕಂಬಾರಗಣವಿ, ಶ್ರೀ ಬಸವರಾಜ ಜಕಾತಿ, ಶ್ರೀ ಮಡಿವಾಳಿ ಕೋಟಿ, ಶ್ರೀ ರಾಯಪ್ಪ ಹಣಜಿ, ಗೌಡ್ರು ತಿಮ್ಮಾಪೂರ, ಡಾ: ಎಸ್.ಬಿ.ದಳವಾಯಿ, ಅಧ್ಯಕ್ಷರು ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್, ಶ್ರೀ ಗಂಗಪ್ಪ ಕರಿಕಟ್ಟಿ, ಶ್ರೀ ರಾಘವೇಂದ್ರ ,ಸಹಾಯಕ ಕ್ಯೂರೇಟರ್, ಶ್ರೀ ಸೂರ್ಯಕಾಂತ ಕಿತ್ತೂರ, ಶ್ರೀ ಮಡಿವಾಳಿ ಕೊರಿ, ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಾದ ಶ್ರೀ ಈರಣ್ಣಾ ಕುಂಟಿರಪ್ಪಗೋಳ, ಶ್ರೀ ಪ್ರಕಾಶ ಸುಣಗಾರ, ಶ್ರೀ ದಿಲಾವರ ಯರಗಟ್ಟಿ, ಶ್ರೀ ರುದ್ರಪ್ಪ ಮುತ್ತೆಣ್ಣವರ, ಶ್ರೀ ಬಸವರಾಜ ಹಂಜಿನಾಳ, ಶ್ರೀ ಫಕೀರಪ್ಪ ಲಿಂಗಮೇತ್ರಿ, ಮತ್ತು ಕಿತ್ತೂರ ಪಟ್ಟಣದ ಎಲ್ಲ ಪತ್ರಿಕಾ ಮಾಧ್ಯಮದವರು, ದ್ರಶ್ಯಮಾಧ್ಯಮದವರು ಹಾಜರ ಇದ್ದರು. ನಂತರ ಸದರಿ ರಥಯಾತ್ರೆಯನ್ನು ಧಾರವಾಡಕ್ಕೆ ಬಿಳ್ಕೋಡಲಾಯಿತು.
0 Comments