ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರುಕಲ್ಮಠದಲ್ಲಿ ರವಿವಾರ ಶಿವಾನುಭವ ನಿಮಿತ್ತ ಅಕ್ಕಮಹಾದೇವಿ ಜಯಂತಿ


 ಚನ್ನಮ್ಮನ ಕಿತ್ತೂರು:- ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ರವಿವಾರ ದಿನಾಂಕ 12 ರಂದು ಸಾಯಂಕಾಲ 7 ಗಂಟೆಗೆ ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು ಮತ್ತು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗಳ ಸಂಯುಕ್ತ ಆಶ್ರಯದಲ್ಲಿ 18 ನೆಯ ಮಾಸಿಕ ಶಿವಾನುಭವ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪೂಜ್ಯರಾದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಪತ್ರಿಕೆ ಕೊಡಮಾಡುವ ವಿಕೆ ಎಮರ್ಜಿಂಗ್ ವುಮೆನ್ ಅಚೀವರ್ಸ ಆಫ್ ಕರ್ನಾಟಕ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರೂ ಮತ್ತು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟೀಲ ಆಗಮಿಸಲಿದ್ದಾರೆ. ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ಮೀನಾಕ್ಷಿ ಅಶೋಕಕುಮಾರ ಅಕ್ಕಮಹಾದೇವಿ ಜಯಂತಿ ಕುರಿತು ಉಪನ್ಯಾಸ ನೀಡುವರು.

ಇತ್ತೀಚೆಗೆ ಹಿರೇನಂದಿಹಳ್ಳಿಯ ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳ ಪುರಾಣ ಗ್ರಂಥವನ್ನು ರಚಿಸಿದ ಶಿಕ್ಷಕರೂ,ಸಾಹಿತಿಗಳೂ ಆಗಿರುವ ಶ್ರೀ ನಾಗಯ್ಯ ಈಶ್ವರಯ್ಯ ಹುಲೆಪ್ಪನವರಮಠ ಇವರನ್ನು ಸನ್ಮಾನಿಸಲಾಗುವದು.

ಶ್ರೀ ಈಶ್ವರ ಗಡಿಬಿಡಿ ಮತ್ತು ಶ್ರೀ ಪ್ರಲ್ದಾದ ಶಿಗ್ಗಾಂವಿ ನೇತೃತ್ವದ ಗ್ರಾಮ ದೇವಿ ಭಜನಾ ಮಂಡಳ, ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ಮಂಡಳ, ರಾಣಿ ಚನ್ನಮ್ಮ ಮಹಿಳಾ ವೇದಿಕೆ ಮತ್ತು ಹಿರೇನಂದಿಹಳ್ಳಿಯ ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳ ಭಜನಾ ಮಂಡಳದವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿದ್ದು ಕಿತ್ತೂರ ನಾಡಿನ ಶರಣ ಶರಣೆಯರು ಭಾಗವಹಿಸಬೇಕೆಂದು ಡಾ.ಎಸ್.ಬಿ.ದಳವಾಯಿ ಮನವಿ ಮಾಡಿದ್ದಾರೆ.

Post a Comment

0 Comments